Sunday, November 11, 2012

ಅಂಕಮರ್ಮ (Sun Tzu's Art of War) - ೨


ಅಂಕ ಸಾರುವುದು

೧. ಸುನ್ ಜ಼ಿ ಹೇಳಿದ್ದಾನೆ: ಕಾಳದ ವ್ಯವಹಾರಗಳಲ್ಲಿ, ಸಾವಿರ ಕ್ಷಿಪ್ರ ತೇರುಗಳು, ಮತ್ತಷ್ಟೇ ಗಡಸು ತೇರುಗಳು, ಒಂದು ಲಕ್ಷ ಕವಚತೊಟ್ಟ ಕಾಲಾಳುಗಳು ಕಣದಲ್ಲಿರುವರೇ, ಸಾವಿರ ಮೈಲಿಗಳಿಗೆ ಸಾಕಾಗುವಷ್ಟು ಬುತ್ತಿ, ಮನೆ ಮತ್ತು ಕಣದ ಖರ್ಚು- ಅತಿಥಿಗಳ ಮನರಂಜನೆಯೂ ಸೇರಿಸಲ್ಪಟ್ಟು-, ಅಂಟು ಮತ್ತು ಬಣ್ಣಗಳಂಥ ಸಣ್ಣ ಸಾಮಗ್ರಿಗಳು, ತೇರುಗಳು ಮತ್ತು ಆಯುಧಗಳಿಗಾದ ವೆಚ್ಚ, ಇವೆಲ್ಲ ಸೇರಿ ಪ್ರತಿ ದಿನದ ಮೊತ್ತ ಸಾವಿರ ಬೆಳ್ಳಿ ಪಣಗಳಾಗುವುದು. ಒಂದು ಲಕ್ಷ ಕಾಲಾಳುಗಳ ಪಡೆಯನ್ನು ಕಟ್ಟಲು ವೆಚ್ಚವು ಇಂತಿರುವುದು.

೨. ಕಾಳಗವು ನಡೆಯುತ್ತಿರುವ ಸಮಯದಲ್ಲಿ, ಗೆಲುವಿನ ಲಕ್ಷಣಗಳು ಇನ್ನೂ ದೂರದಲ್ಲಿದ್ದರೆ, ಆಳುಗಳ ಆಯುಧಗಳು ಸವೆದು ಹೋಗುತ್ತವೆ, ಅವರ ಹುಮ್ಮಸ್ಸು ಕಂದುತ್ತದೆ. ಪಟ್ಟಣವನ್ನು ಮುತ್ತಿಗೆ ಹಾಕಿರುವರೆ, ನೀವು ಬಳಲಿ ಹೋಗುತ್ತೀರಿ.

೩. ಮತ್ತೊಮ್ಮೆ ಹೇಳಬೇಕಾಗಿರುವುದು, ಕದನ ಎಳೆದುಕೊಂಡು ಹೋದರೆ, ರಾಜ್ಯದ ಬಗೆಗಳು ಈ ಪರಿಶ್ರಮಕ್ಕೆ ಬೇಕಾದ ದುಡ್ಡೇರಿಸುವುದರಲ್ಲಿ ಹಿಂದೆ ಬೀಳುವುವು.

೪. ನಿಮ್ಮ ಆಯುಧಗಳು ಸವೆದಾಗ, ಹುಮ್ಮಸ್ಸು ಕನ್ದಿದಾಗ, ಚೈತನ್ಯ ಬತ್ತಿದಾಗ ಮತ್ತು ಖಜಾನೆ ಖಾಲಿಯಾದಾಗ, ಬೇರೆ ನಾಯಕರು ನಿಮ್ಮ ಕಷ್ಟದ ಉಪಯೋಗ ಪಡೆಯಲು ಎದ್ದು ಬರುವರು. ಆಗ ಯಾವನೂ, ಎಷ್ಟೊಂದು ಜಾಣನಾದರೂ, ಮುಂಬರುವ ಖಚಿತ ಪರಿಣಾಮಗಳನ್ನು ತಪ್ಪಿಸಲಾಗುವುದಿಲ್ಲ.

೫. ಹಾಗಾಗಿ, ನಾವು ಅಂಕದಲ್ಲಿ ಆತುರಗೆಟ್ಟವರ ದಡ್ಡತನವನ್ನು ಕೇಳಿದ್ದರೂ, ತುಂಬಾ ತಡ ಮಾಡುವ ಹವಣಿಕೆಗಳು ಚತುರನೀತಿ ಎಂದು ಹೇಳುವಂತಿಲ್ಲ.

೬. ತುಂಬಾ ಸಮಯ ಎಳೆದುಕೊಂಡು ಹೋದ ಕಾಳಗಗಳಿಂದ ಪ್ರಯೋಜನಪಟ್ಟ ನಾಡುಗಳ ಯಾವುದೇ ನಿದರ್ಶನಗಳಿಲ್ಲ.

೭. ಯಾವನು ಕಾಳಗದ ಕೇಡುಗಳನ್ನು ಚೆನ್ನಾಗಿ ಅರಿತಿರುವನೋ, ಅವನು ಮಾತ್ರವೆ ಅದನ್ನು ಲಾಭದಾಯಕವಾಗಿ ನಡೆಸುವ ಸಾಮರ್ಥ್ಯ ಹೊಂದಿರುತ್ತಾನೆ.

೮. ಚಾಣಾಕ್ಷ ಅನ್ಕೇಯ ಎರಡನೆಯ ಬಾರಿಗೆ ಕರ ಹೇರುವುದಿಲ್ಲ, ಅಲ್ಲದೇ ಅವನ ಸಾಮಾನು ಬಂಡಿಗಳನ್ನು ಎರಡು ಸರ್ತಿಗಿಂತಲು ಮೇಲಾಗಿ ತುಂಬಬೇಕಾಗಿಲ್ಲ.

೯. ಕದನ ಸಾಮಗ್ರಿಗಳನ್ನು ನಿಮ್ಮ ನಾಡಿಂದ ತನ್ನಿ, ಆದರೆ ಊಟ ವೈರಿಯಿಂದ ಕಬಳಿಸಿ. ಈ ರೀತಿ ಪಡೆಗೆ ಬೇಕಾದಷ್ಟು ಆಹಾರ ಸ್ಥಿರವಾಗುವುದು.

೧೦.
To be continued:
Source:
http://suntzusaid.com/book/2

No comments:

Post a Comment